
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ (PM-Kisan) ಯೋಜನೆಯಡಿ ಮುಖ ಚರ್ಯೆ ಆಧಾರಿತ ಇ-ಕೆವೈಸಿ (Face Recognition e-KYC) ಮಾಡುವ ವಿಧಾನವು ಬಹಳ ಸುಲಭವಾಗಿದ್ದು, ರೈತರು ತಮ್ಮ ಮೊಬೈಲ ಮೂಲಕವೇ ಮಾಡಿಕೊಳ್ಳಬಹುದು. ಇದಕ್ಕೆ ಆಧಾರ್ಗೆ ಮೊಬೈಲ ನಂಬರ ಲಿಂಕ್ ಆಗಿರಬೇಕಿಲ್ಲ ಎಂಬುದು ಇದರ ವಿಶೇಷತೆಯಾಗಿದೆ.
ಈ ವಿಧಾನವನ್ನು ಅನುಸರಿಸಲು ಹಂತ-ಹಂತದ ಮಾಹಿತಿ ಇಲ್ಲಿದೆ:-
ಬೇಕಾಗುವ ಸಿದ್ಧತೆಗಳು:-
- ಆಂಡ್ರಾಯ್ಡ್ ಸ್ಮಾರ್ಟ್ಫೋನ.
- ಗೂಗಲ ಪ್ಲೇ ಸ್ಟೋರನಿಂದ ಅಧಿಕೃತ “PMKISAN GoI” ಮೊಬೈಲ ಆ್ಯಪ ಹಾಗೂ “AadhaarFaceRd” (ಆಧಾರ ಫೇಸ ಆರ್ಥಿಕರಣ) ಆ್ಯಪ ಅನ್ನು ಡೌನಲೋಡ ಮಾಡಿ ಇನಸ್ಟಾಲ ಮಾಡಿಕೊಳ್ಳಬೇಕು.
ಮುಖ ಚರ್ಯೆ ಇ-ಕೆವೈಸಿ(e-KYC ) ಮಾಡುವ ಹಂತಗಳು:-
- ಹಂತ 1: ನಿಮ್ಮ ಮೊಬೈಲನಲ್ಲಿ PMKisan GoI ಆ್ಯಪ ತೆರೆಯಿರಿ.
- ಹಂತ 2: ಹೋಮ ಪೇಜನಲ್ಲಿರುವ NEXT ಮೇಲೆ ಕ್ಲಿಕ ಮಾಡಿ.
- ಹಂತ 3: Login ಮೇಲೆ ಕ್ಲಿಕ ಮಾಡಿ. ನಂತರ Beneficiary ಆಯ್ಕೆಯ ಮೇಲೆ ಕ್ಲಿಕ ಮಾಡಬೇಕು.
- ಹಂತ 4: ನಿಮ್ಮ ಆಧಾರ ಸಂಖ್ಯೆಯನ್ನು (Aadhaar Number) ನಮೂದಿಸಿ ಮತ್ತು ಸಬ್ಮಿಟ ನೀಡಿ.
- ಹಂತ 5: ಈಗ ಆ್ಯಪ್ನಲ್ಲಿ “Face Authentication” (ಮುಖದ ದೃಢೀಕರಣ) ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ ಮಾಡಿ.
- ಹಂತ 6: ನಿಮ್ಮ ಫೋನ್ನ ಕ್ಯಾಮೆರಾ ತೆರೆಯುತ್ತದೆ. ಸೂಚನೆಗೆ ತಕ್ಕಂತೆ ನಿಮ್ಮ ಮುಖದ ಫೋಟೋವನ್ನು ಸ್ಪಷ್ಟವಾಗಿ (ಬೆಳಕು ಇರುವ ಜಾಗದಲ್ಲಿ ನಿಂತು ಕಣ್ಣು ಮಿಟುಕಿಸಿ) ಕ್ಯಾಪ್ಚರ ಮಾಡಲು ಅನುಮತಿ ನೀಡಿ.
- ಹಂತ 7: ನಿಮ್ಮ ಮೊಬೈಲ ಆ್ಯಪಗೆ ಜೋಡಿಸಲಾದ MPIN(6 Digit) ನಮೂದಿಸಿ.
- ಹಂತ 8: ಮುಖದ ಗುರುತು ಸರಿಯಾಗಿ ತಾಳೆಯಾದ ಕೂಡಲೇ ನಿಮ್ಮ e-KYC ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಈ ವಿಧಾನದಿಂದ ಬೆರಳಚ್ಚು (Biometric) ಸಿಗದ ಸಮಸ್ಯೆ ಇರುವವರಿಗೂ ಅಥವಾ ಆಧಾರಗೆ ಫೋನ ನಂಬರ ಲಿಂಕ ಇಲ್ಲದವರಿಗೂ ಬಹಳ ಅನುಕೂಲವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: ಗ್ರಾಮ ಒನ/ಸಿ ಎಸ್ ಸಿ ಸೆಂಟರ್ ಅಥವಾ “ರೈತ ಸಂಪರ್ಕ ಕೇಂದ್ರ” ವನ್ನು ಸಂಪರ್ಕ ಮಾಡಬಹುದು.
Leave a Reply